Home ಜಿಲ್ಲಾ ಸುದ್ದಿಗಳುಕೊಟ್ಟೂರುಸ್ವಾಮಿ ಐಟಿಐನಲ್ಲಿ ಜೂ. 3ರಂದು ಕ್ಯಾಂಪಸ್ ಸಂದರ್ಶನ

ಕೊಟ್ಟೂರುಸ್ವಾಮಿ ಐಟಿಐನಲ್ಲಿ ಜೂ. 3ರಂದು ಕ್ಯಾಂಪಸ್ ಸಂದರ್ಶನ

by Editor
0 comments

ಚೈತನ್ಯ ನ್ಯೂಸ್‌ ೨೪ ನರೇಗಲ್ಲ ಜೂ.2:

ಪಟ್ಟಣದ ಕೊಟ್ಟೂರುಸ್ವಾಮಿ ಐಟಿಐ ಕಾಲೇಜಿನಲ್ಲಿ ಜೂನ್ 3ರಂದು ಅಂತರರಾಷ್ಟ್ರೀಯ ಕಾರು ಉತ್ಪಾದನಾ ಸಂಸ್ಥೆಯ ವತಿಯಿಂದ ಕ್ಯಾಂಪಸ್ ಸಂದರ್ಶನ ಆಯೋಜಿಸಲಾಗಿದೆ ಎಂದು ಪ್ರಾಚಾರ್ಯ ಬಸವರಾಜ ಜೋಳದ ತಿಳಿಸಿದ್ದಾರೆ.
ಬೆಳಿಗ್ಗೆ 10 ಗಂಟೆಯಿಂದ ಆರಂಭವಾಗಲಿರುವ ಈ ಕ್ಯಾಂಪಸ್ ಸಂದರ್ಶನದಲ್ಲಿ ಭಾಗವಹಿಸಲು ಇಚ್ಛಿಸುವ ಅಭ್ಯರ್ಥಿಗಳು ಯಾವುದೇ ಟ್ರೇಡ್‌ನಲ್ಲಿ ಐಟಿಐ ವಿದ್ಯಾರ್ಹತೆ ಹೊಂದಿರಬೇಕು. ಆಯ್ಕೆಯಾಗುವ ಅಭ್ಯರ್ಥಿಗಳಿಗೆ ತಿಂಗಳಿಗೆ ₹19,856 ವೇತನದ ಜೊತೆಗೆ ಓವರ್‌ಟೈಮ್ (ಒಟಿ) ಸೌಲಭ್ಯ, ಉಚಿತ ಕ್ಯಾಂಟೀನ್, ಕ್ಯಾಬ್ ವ್ಯವಸ್ಥೆ, ಉಚಿತ ಸಮವಸ್ತ್ರ ಹಾಗೂ ಶೂಗಳನ್ನು ನೀಡಲಾಗುವುದು ಎಂದು ಅವರು ತಿಳಿಸಿದ್ದಾರೆ.
ಆಸಕ್ತ ಹಾಗೂ ಅರ್ಹ ಅಭ್ಯರ್ಥಿಗಳು ತಮ್ಮ ಮೂಲ ಪ್ರಮಾಣಪತ್ರಗಳೊಂದಿಗೆ ಜೂನ್ 3ರಂದು ಬೆಳಿಗ್ಗೆ ಸ್ವಂತ ಖರ್ಚಿನಲ್ಲಿ ಸಂದರ್ಶನಕ್ಕೆ ಹಾಜರಾಗುವಂತೆ ಪ್ರಕಟಣೆಯಲ್ಲಿ ತಿಳಿಸಲಾಗಿದೆ. ಕ್ಯಾಂಪಸ್ ಸಂದರ್ಶನದ ಕುರಿತು ಹೆಚ್ಚಿನ ಮಾಹಿತಿಗಾಗಿ ಕೊಟ್ಟೂರುಸ್ವಾಮಿ ಐಟಿಐ ಕಾಲೇಜನ್ನು ಸಂಪರ್ಕಿಸಬಹುದು ಎಂದು ಬಸವರಾಜ ಜೋಳದ ತಿಳಿಸಿದ್ದಾರೆ.

You may also like

Leave a Comment

➤ ಶ್ರೀ ರಂಭಾಪುರಿ ಜಗದ್ಗುರುಗಳವರ ಸಪ್ಟಂಬರ್ ಮಾಹೆಯ ಪ್ರವಾಸ    ➤ ಅಬ್ಬಿಗೇರಿ ಶ್ರೀ ಬಯಲು ಬಸವೇಶ್ವರ ದೇವಸ್ಥಾನದಲ್ಲಿ ಸನ್ಮಾನ್ಯ ಜಿ.ಎಸ್. ಪಾಟೀಲರಿಂದ ಪೂಜೆ ಸಲ್ಲಿಕೆ.   ➤    ➤ ಗಣೇಶೋತ್ಸವಕ್ಕೆ ಕಟ್ಟುನಿಟ್ಟಿನ ನಿಯಮ: ಡಿಜೆ ಸಂಪೂರ್ಣ ನಿಷೇಧ:ಶಾಂತಿಯುತ ಆಚರಣೆಗೆ ಆದ್ಯತೆ ನೀಡಿ : ಪಿ ಎಸ್ ಐ ಐಶ್ವರ್ಯ ನಾಗರಾಳ    ➤ ಜೀವನದಲ್ಲಿ ಆಸಕ್ತಿ ಕಳೆದುಕೊಂಡು ಬಾಳಬಾರದು : ಶ್ರೀ ರಂಭಾಪುರಿ ಜಗದ್ಗುರುಗಳು