130
ಚೈತನ್ಯ ನ್ಯೂಸ್ 24 ಗುಬ್ಬಿ ಜೂ.23:
ದೇಹದ ಸಂರಕ್ಷಣೆಗಾಗಿ ಜೀವನ ಸತ್ವಗಳು ಅವಶ್ಯಕತೆ ಇರುವಂತೆ ಆತ್ಮ ಸಂಶೋಧನೆಗೆ ಧಾರ್ಮಿಕ ತತ್ವಗಳೇ ಜೀವನದ ಸಂಜೀವಿನಿಯಾಗಿವೆ. ಮಾನವ ಜೀವನದ ಮೌಲ್ಯಗಳು ಶಾಶ್ವತವಾಗಿದ್ದು ಇವುಗಳು ಅಂತ್ಯಗೊ0ಡರೆ ಮಾನವೀಯತೆಯು ಅಂತ್ಯಗೊAಡAತೆ ಎಂದು ಬಾಳೆಹೊನ್ನೂರು ಶ್ರೀ ರಂಭಾಪುರಿ ಡಾ.ವೀರಸೋಮೇಶ್ವರ ಜಗದ್ಗುರುಗಳು ಅಭಿಪ್ರಾಯಪಟ್ಟರು.

ಅವರು ಮಂಗಳವಾರ ತಾಲೂಕಿನ ನಿಟ್ಟೂರು ಬಾಲಾಜಿ ಬಡಾವಣೆಯಲ್ಲಿ ಜರುಗಿದ ಜನ ಜಾಗೃತಿ ಧರ್ಮ ಸಮಾರಂಭದ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡುತ್ತಿದ್ದರು.
ಬದುಕಿನ ಚಟುವಟಿಕೆಗಳು ಸಂಪೂರ್ಣ ಸಾಕಾರಗೊಳ್ಳಲು ಧಾರ್ಮಿಕ ಮೌಲ್ಯಗಳ ಪರಿಪಾಲನೆಯ ಅವಶ್ಯಕತೆಯಿದೆ. ಧರ್ಮ ದೀಪದ ಬೆಳಕಿನಿಂದ ಮಾತ್ರ ಅಜ್ಞಾನ ದೂರವಾಗಲು ಸಾಧ್ಯವಾಗುತ್ತದೆ. ಕೆಲಸ ದೊಡ್ಡದಿರಲಿ ಸಣ್ಣದಿರಲಿ ಶುದ್ಧ ಮನಸ್ಸಿನಿಂದ ಮಾಡಿದಾಗ ಪರಿಣಾಮ ದೊಡ್ಡದಾಗಿರುತ್ತದೆ. ಪುಟ್ಟ ಬೀಜವೇ ಹೆಮ್ಮರಕ್ಕೆ ಮೂಲ. ಕರ್ತವ್ಯದ ಕಾಲು ದಾರಿ ಕೀರ್ತಿಯ ಹೆದ್ದಾರಿ. ಗುರಿಯೆಡೆಗೆ ಸಾಗುವಾಗ ಸಾವಿರಾರು ಸಂಕಷ್ಟಗಳು ಬರುತ್ತವೆ. ಅವುಗಳಿಗೆ ಅಂಜದೇ ಅಳುಕದೇ ಗಟ್ಟಿ ಹೆಜ್ಜೆಯನ್ನಿಟ್ಟರೆ ಜೀವನ ಉಜ್ವಲಗೊಳ್ಳುತ್ತದೆ.

ಚತುರ್ವಿಧ ಪುರುಷಾರ್ಥಗಳಲ್ಲಿ ಒಂದನ್ನಾದರೂ ಸಂಪಾದಿಸಿಕೊಳ್ಳದಿದ್ದರೆ ಜೀವನ ಸಮೃದ್ಧಗೊಳ್ಳದು. ಮನುಷ್ಯನ ಮನಸ್ಸು ಮಲಿನಗೊಂಡ ಬಟ್ಟೆಯಂತಾಗಿದೆ. ಮನದ ಕನ್ನಡಿಯ ಮೇಲೆ ಅಂಟಿದ ಧೂಳು ಜಾಡಿಸಿ ಪರಿಶುದ್ಧಗೊಳ್ಳಲು ಶ್ರೀ ಗುರುವಿನ ಮಾರ್ಗದರ್ಶನ ಮತ್ತು ಬೋಧಾಮೃತ ಅವಶ್ಯಕವೆಂದು ಶ್ರೀ ಜಗದ್ಗುರು ರೇಣುಕಾಚಾರ್ಯರು ಸಿದ್ಧಾಂತ ಶಿಖಾಮಣಿಯಲ್ಲಿ ಪ್ರತಿಪಾದಿಸಿದ್ದಾರೆ. ಶ್ರೀಮತಿ ಉಷಾ ಮತ್ತು ಚಂದ್ರಶೇಖರ ಅವರು ದೇಹವನ್ನು ದುಡಿಮೆಗೆ ಮನಸ್ಸನ್ನು ದೇವರಿಗೆ ಸಮರ್ಪಿಸಿದರೆ ಬದುಕು ಸಾರ್ಥಕಗೊಳ್ಳುತ್ತದೆ ಎಂದು ನಂಬಿ ನಡೆದ ಆದರ್ಶ ದಂಪತಿಗಳು. ವೈವಾಹಿಕ ಜೀವನದ ೪೦ನೇ ವರ್ಷದ ವಾರ್ಷಿಕೋತ್ಸವ ಮತ್ತು ದಂಪತಿಗಳ ಷಷ್ಠö್ಯಬ್ಧಿ ಸಮಾರಂಭ ಜರುಗುತ್ತಿರುವುದು ಸಂತೋಷ ಉಂಟು ಮಾಡಿದೆ ಎಂದರು.

ಸಮಾರAಭ ಉದ್ಘಾಟಿಸಿದ ದೊಡ್ಡಗುಣಿ ಹಿರೇಮಠದ ರೇವಣಸಿದ್ಧೇಶ್ವರ ಶಿವಾಚಾರ್ಯರು ಮಾತನಾಡಿ ಮನುಷ್ಯ ಹುಟ್ಟಿ ಬರುವಾಗ ಪವಿತ್ರ ಹೃದಯದವನಾಗಿರುತ್ತಾನೆ. ಲೌಕಿಕದಲ್ಲಿ ಬೆಳೆದ ಮನುಷ್ಯನ ಮನಸ್ಸು ಮಲಿನಗೊಳ್ಳುತ್ತದೆ. ಸಕಲ ಜೀವಾತ್ಮರಿಗೆ ಒಳಿತನ್ನೇ ಮಾಡಿದ ಧರ್ಮ ವೀರಶೈವ. ಶ್ರೀ ಜಗದ್ಗುರು ರೇಣುಕಾಚಾರ್ಯರ ಧಾರ್ಮಿಕ ಮತ್ತು ಸಾಮಾಜಿಕ ಮೌಲ್ಯಗಳನ್ನು ಪ್ರಬುದ್ಧಗೊಳಿಸಲು ಪ್ರಾಮಾಣಿಕ ಪ್ರಯತ್ನ ಮಾಡಬೇಕಾಗಿದೆ ಎಂದರು. ಸಿದ್ಧರಬೆಟ್ಟ ಕ್ಷೇತ್ರದ ವೀರಭದ್ರ ಶಿವಾಚಾರ್ಯರು ಪ್ರಾಸ್ತಾವಿಕವಾಗಿ ಮಾತನಾಡಿದರು. ತಿಪಟೂರು ಷಡಕ್ಷರಮಠದ ರುದ್ರಮುನಿ ಸ್ವಾಮೀಜಿ, ಎಲೆರಾಂಪುರ ಡಾ||ಹನುಮಂತನಾಥ ಸ್ವಾಮೀಜಿ, ಎಡೆಯೂರು ರೇಣುಕ ಶಿವಾಚಾರ್ಯರು ಉಪದೇಶಾಮೃತವನ್ನಿತ್ತರು.

ತೇವಡೆಹಳ್ಳಿ, ಬೆಳ್ಳಾವಿ ಕಾಡಸಿದ್ಧೇಶ್ವರಮಠ, ತಾವರೆಕೆರೆ ಡಾ.ಅಭಿನವ ಸಿದ್ಧಲಿಂಗ ಶಿವಾಚಾರ್ಯರು, ಚನ್ನಗಿರಿ ಕೇದಾರ ಶಿವಶಾಂತವೀರ ಶಿವಾಚಾರ್ಯರು, ಬಿಳಕಿ ಹಿರೇಮಠದ ರಾಚೋಟೇಶ್ವರ ಬಿಳಕಿ ಹಿರೇಮಠ, ನಾಗಲಾಪುರ ತೇಜೇಶಲಿಂಗ ಶಿವಾಚಾರ್ಯರು, ಸಂಗೊಳ್ಳಿ ಗುರುಲಿಂಗ ಶಿವಾಚಾರ್ಯರು, ಮಳಲಿಮಠದ ಡಾ.ನಾಗಭೂಷಣ ಶಿವಾಚಾರ್ಯರು ಮೊದಲ್ಗೊಂಡು ಸುಮಾರು ೨೦ ಜನ ಪಟ್ಟಾಧ್ಯಕ್ಷರು ಉಪಸ್ಥಿತರಿದ್ದರು. ಹಲವಾರು ಗಣ್ಯರಿಗೆ ಶ್ರೀ ರಂಭಾಪುರಿ ಜಗದ್ಗುರುಗಳು ಗುರುರಕ್ಷೆಯಿತ್ತು ಶುಭ ಹಾರೈಸಿದರು.

ತೇವಡೆಹಳ್ಳಿ ಪ್ರಸನ್ನಕುಮಾರ್ ಮತ್ತು ದಕ್ಷಿಣಾಮೂರ್ತಿ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡಿದ್ದರು. ಬೀರೂರು ರುದ್ರಮುನಿ ಶಿವಾಚಾರ್ಯರು ನಿರೂಪಣೆ ಮಾಡಿದರು. ಬೆಂಗಳೂರಿನ ಶಿವಶಂಕರ ಶಾಸ್ತಿçಗಳಿಂದ ಸಂಗೀತ ಸೌರಭ ಜರುಗಿತು. ಸಚಿನ್ ಎನ್.ಸಿ. ಸರ್ವರನ್ನು ಸ್ವಾಗತಿಸಿದರು. ಸಮಾರಂಭದ ನಂತರ ಅನ್ನದಾಸೋಹ ಜರುಗಿತು. ಸಮಾರಂಭದ ಹಿಂದಿನ ದಿನ ಭವ್ಯ ಸಾರೋಟ ಮೆರವಣಿಗೆ ಮೂಲಕ ಸಂಭ್ರಮದ ಉತ್ಸವ ಜರುಗಿತು. ಸಹಸ್ರಾರು ಭಕ್ತರು ಪಾಲ್ಗೊಂಡು ಪುನೀತರಾದರು.