Home ಕರ್ನಾಟಕವಿಶ್ವ ಯೋಗ ದಿನಾಚರಣೆಗೆ ಚಾಲನೆ

ವಿಶ್ವ ಯೋಗ ದಿನಾಚರಣೆಗೆ ಚಾಲನೆ

by Editor
0 comments

ಚೈತನ್ಯ ನ್ಯೂಸ್‌ 24 ಹನುಮಸಾಗರ ಜೂ.23:

ಯೋಗವು ಕೇವಲ ದೈಹಿಕ ವ್ಯಾಯಾಮಕ್ಕೆ ಸೀಮಿತವಾಗದೆ, ದೇಹ, ಮನಸ್ಸು ಹಾಗೂ ಆತ್ಮದ ಸಮತೋಲನವನ್ನು ಸಾಧಿಸುವ ಶ್ರೇಷ್ಟ ಸಾಧನೆಯಾಗಿದೆ ಎಂದು ಪಂ.ಪ್ರಲ್ಹಾದಚಾರ್ಯ ಪೂಜಾರ ಹೇಳಿದರು.
ಅವರು ಪಟ್ಟಣದ ಕೆಪಿಎಸ್ ಮೈದಾನದಲ್ಲಿ ನಾನಾ ಶಾಲೆಗಳ ವಿದ್ಯಾರ್ಥಿಗಳು ಹಾಗೂ ಸಂಸ್ಥೆಗಳಿಂದ ಭಾನುವಾರ ನಡೆದ ವಿಶ್ವ ಯೋಗ ದಿನಾಚರಣೆಯಲ್ಲಿ ಅವರು ಮಾತನಾಡಿದರು. ಯೋಗವು ಕೇವಲ ಆಸನಗಳಿಗೆ ಸೀಮಿತವಲ್ಲ. ಯೋಗಕ್ಕೆ ಎಂಟು ಅಂಗಗಳಿದ್ದು, ಪ್ರತಿಯೊಬ್ಬರೂ ಒಂದೊಂದು ಹಂತವನ್ನು ಕ್ರಮೇಣ ತಲುಪಬೇಕು ಎಂದರು.
ಯೋಗ ಸಾಧಕರಾದ ಶಿವಶಂಕರ ಮೆದಿಕೇರಿ, ಆನಂದ ಕಾಟ್ವಾ, ಆದಿತ್ಯ ಕ್ರೀಡಾ ಸಂಸ್ಥೆಯ ಅಧ್ಯಕ್ಷ ಸತೀಶ ಜಮಖಂಡಿಕರ, ಬಸವರಾಜ ಹಳ್ಳೂರ, ಸೂಚಪ್ಪ ದೇವರಮನಿ, ರುದ್ರಗೌಡ ಗೌಡಪ್ಪನವರ, ಶೇಖರಪ್ಪ ಕುರಿ, ಬಸವರಾಜ ದ್ಯಾವಣ್ಣಣವರ, ಮಾತಾ ಬಿ.ಎಸ್., ಬಸಮ್ಮ ಹಿರೇಮಠ, ಸುನಿತಾ ಕೋಮಾರಿ, ಶರಣಬಸಪ್ಪ ಮಾಹೋಳ, ಉಪಪ್ರಾಂಶುಪಾಲ ಮಹಾಂತಯ್ಯ ಸೊಪ್ಪಿಮಠ, ಎಚ್.ಎಚ್.ಇಳಕಲ್, ವೀರೇಶ ವಿಶ್ವಕರ್ಮ ಇತರರು ಇದ್ದರು.
ಫೋಟೊ ಶಿರ್ಷಿಕೆ: ಹನುಮಸಾಗರದ ಕೆಪಿಎಸ್ ಮೈದಾನದಲ್ಲಿ ಭಾನುವಾರ ವಿಶ್ವ ಯೋಗ ದಿನಾಚರಣೆಯನ್ನು ಉದ್ಘಾಟಿಸಲಾಯಿತು.

You may also like

Leave a Comment

ಸದ್ಗುಣ ಸಚ್ಚಾರಿತ್ರ್ಯದಿಂದ ಬದುಕು ಸಮೃದ್ಧ : ಶ್ರೀ ರಂಭಾಪುರಿ ಜಗದ್ಗುರುಗಳು   ಅಬ್ಬಿಗೇರಿಯಲ್ಲಿ ಕಾರ ಹುಣ್ಣಿಮೆ ಸಂಭ್ರಮ: ಬಿಳಿ ಎತ್ತಿನ ಕರಿ ಮುರಿತ – ಬಿಳಿ ಬೆಳೆಗೆ ಶುಭ ಸಂಕೇತ   ಕರಿ ಹರಿದ ಬಿಳಿ ಎತ್ತು: ಊರಿಗೇ ಒಲಿದ ಅದೃಷ್ಟ, ಈ ಬಾರಿ ಬಂಪರ್ ಬೆಳೆ ನಿಶ್ಚಿತ!   ಜೀವನದಲ್ಲಿ ಗುರಿಯಿರಲಿ ಉರಿ ಬೇಡ : ಶ್ರೀ ರಂಭಾಪುರಿ ಜಗದ್ಗುರುಗಳು   ಶ್ರೀ ರಂಭಾಪುರಿ ಜಗದ್ಗುರುಗಳವರ ಜುಲೈ ಮಾಹೆಯ ಪ್ರವಾಸ