42
ಚೈತನ್ಯ ನ್ಯೂಸ್ 24 ಕನ್ನಡ, ನರೇಗಲ್ಲ ಸ.೭:
ಶ್ರಾವಣ ಮಾಸದ ಕೊನೆಯ ಸೋಮವಾರದಂದು ಜರುಗಲಿರುವ ಪ್ರಸಿದ್ಧ ಅಬ್ಬಿಗೇರಿಯ ಶ್ರೀ ಬಯಲು ಬಸವೇಶ್ವರ ದೇವಸ್ಥಾನದ ರಥೋತ್ಸವದ ಅಂಗವಾಗಿ, ನೂತನ ಕರ್ನಾಟಕ ವಿಧಾನಸಭಾ ಅಧ್ಯಕ್ಷರಾದ ಸನ್ಮಾನ್ಯ ಶ್ರೀ ಜಿ.ಎಸ್. ಪಾಟೀಲರು ಕ್ಷೇತ್ರಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿ,ಆಶೀರ್ವಾದ ಪಡೆದರು.
ಈ ಸಂದರ್ಭದಲ್ಲಿ ದೇವಸ್ಥಾನದ ಟ್ರಸ್ಟ್ ಕಮಿಟಿಯ ಸದಸ್ಯರು ಹಾಗೂ ಗ್ರಾಮಸ್ಥರು ಸನ್ಮಾನ್ಯ ವಿಧಾನಸಭಾ ಅಧ್ಯಕ್ಷರನ್ನು ಗೌರವಿಸಿ, ಆತ್ಮೀಯವಾಗಿ ಸನ್ಮಾನಿಸಿದರು.
ಕಾರ್ಯಕ್ರಮದಲ್ಲಿ ಪ್ರಮುಖರಾದ ಮಿಥುನ ಜಿ. ಪಾಟೀಲ, ವೀರಯ್ಯ ಸೋಮನಕಟ್ಟಿ ಮಠ, ರಾಮನಗೌಡ ಹಲಕುರ್ಕಿ, ಬಸವರಾಜ ಪಲ್ಲೇದ, ಅಂದಪ್ಪ ವೀರಾಪೂರ, ಅಲ್ಲಾಭಕ್ಷಿ ನದಾಫ, ಸುರೇಶ ಶಿರೋಳ, ಎಂ.ಕೆ. ಅಂಗಡಿ, ಎಚ್.ಟಿ. ದ್ವಾಸಲ, ಬಾಬು ಬನ್ನಿಕೊಪ್ಪ, ಶಿವಣ್ಣ ಗುಗ್ಗರಿ, ಅಜ್ಜಪ್ಪ ಗೌಡ ಪಾಟೀಲ, ಬಸವರಾಜ ಕಮ್ಮಾರ, ಗಣೇಶ ಶಾಸ್ತ್ರಿ ಮಠ, ವಿನಾಯಕ ಜೋಶಿ, ಹೂವಪ್ಪ ಪೂಜಾರ, ಮಂಜುನಾಥ ಪೂಜಾರ, ಶರಣಪ್ಪ ಗುಗ್ಗರಿ, ನಾಗರಾಜ ಹೊಸಮನಿ, ಮಂಜು ಚಿತ್ತರಗಿ,ಬಸವರಾಜ ಹೊಸಮನಿ, ಎಂ.ಡಿ. ಬಸವರಡ್ಡೇರ, ಮಲ್ಲಕಾರ್ಜುನ ಬಸವರಡ್ಡೇರ, ಬುದ್ದಿವಂತಪ್ಪ ಉಸಾಧ್ಯ,ಚನ್ನಬಸು ಹೂಗಾರ, ಮಲಕಾಜಪ್ಪ ಕಲ್ಲೇಶ್ಯಾಣಿ, ಪ್ರಕಾಶ ಜಕರಡ್ಡಿ ಹಾಗೂ ದೇವನ ಗೌಡ ಮುನೇನಕೊಪ್ಪ ಸೇರಿದಂತೆ ದೇವಸ್ಥಾನದ ಟ್ರಸ್ಟ್ ಕಮಿಟಿ ಪದಾಧಿಕಾರಿಗಳು ಮತ್ತು ಗ್ರಾಮದ ಮುಖಂಡರು ಉಪಸ್ಥಿತರಿದ್ದರು.