307
ಚೈತನ್ಯ ನ್ಯೂಸ್ 24 ನರೇಗಲ್ಲ ಮೇ.13:
ಭಾರತ ಗ್ರಾಮಗಳ ದೇಶ, ಗ್ರಾಮಗಳ ಅಭಿವೃದ್ಧಿಯಲ್ಲಿ ದೇಶದ ಅಭಿವೃದ್ಧಿ ಅಡಗಿದೆ ಅದಕ್ಕೆ ಶಿಬಿರಾರ್ಥಿಗಳು ದೇಶದ ಅಭಿವೃದ್ಧಿಗೆ ಪೂರ್ವಕವಾದ ನಿಮ್ಮದೇ ಆದ ಕೊಡುಗೆಗಳನ್ನು ನೀಡುವುದು ಮುಖ್ಯ ಎಂದು ಹಾಲಕರೆ ಗ್ರಾಮದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷ ಎ ಸಿ ಪಾಟೀಲ ಹೇಳಿದರು.
ಸಮೀಪದ ಹಾಲಕೆರೆ ಗ್ರಾಮದಲ್ಲಿ ಅನ್ನದಾನೇಶ್ವರ ಸಭಾಭವನ ಆವರಣದಲ್ಲಿ ನಡೆದ ಮಹಾತ್ಮ ಗಾಂಧಿ ಗ್ರಾಮೀಣ ಅಭಿವೃದ್ಧಿ ಮತ್ತು ಪಂಚಾಯತ್ ರಾಜ್ ವಿಶ್ವವಿದ್ಯಾಲಯ ಗದಗ ಹಾಗೂ ಗ್ರಾಮ ಪಂಚಾಯತ ಹಾಲಕೆರೆ ಇವರ ಸಂಯುಕ್ತ ಆಶ್ರಯದಲ್ಲಿ ಗ್ರಾಮ ವಾಸ್ತವ್ಯ ಮತ್ತು ಅಧ್ಯಯನ ಶಿಬಿರದಲ್ಲಿ ಮುಖ್ಯ ಅತಿಥಿಗಳಾಗಿ ಮಾತನಾಡಿ. ನಮ್ಮ ದೇಶವು ಗ್ರಾಮಗಳ ದೇಶವಾಗಿದ್ದು ಇಲ್ಲಿ ಮುಖ್ಯವಾಗಿ ಗ್ರಾಮೀಣ ಅಭಿವೃದ್ಧಿ ಆದಲ್ಲಿ ದೇಶದ ಅಭಿವೃದ್ಧಿ ಕಾಣಲು ಸಾಧ್ಯ ಅದಕ್ಕಾಗಿ ಎಲ್ಲರ ಹಿತಾಸಕ್ತಿ ಶ್ರಮ ಸಹಕಾರ ಬಹಳ ಮುಖ್ಯವಾಗಿರುತ್ತದೆ. ಗ್ರಾಮೀಣ ಅಭಿವೃದ್ಧಿ ಎಂದರೆ ಕೇವಲ ರಸ್ತೆ, ವಿದ್ಯುತ್, ನೀರು ಎಂಬ ಮೂಲಸೌಕರ್ಯಗಳ ಅಭಿವೃದ್ಧಿಯಷ್ಟೇ ಅಲ್ಲ; ಅದು ಶಿಕ್ಷಣ, ಆರೋಗ್ಯ, ಉದ್ಯೋಗಾವಕಾಶ, ಕೃಷಿ ಸುಧಾರಣೆ, ಮಹಿಳಾ ಸಬಲೀಕರಣ ಮತ್ತು ಪರಿಸರ ಸಂರಕ್ಷಣೆ ಎಲ್ಲವನ್ನೂ ಒಳಗೊಂಡ ಸಮಗ್ರ ಪ್ರಕ್ರಿಯೆಯಾಗಿದೆ.ಇಂದಿನ ದಿನಗಳಲ್ಲಿ ಸರ್ಕಾರವೂ ಗ್ರಾಮೀಣ ಅಭಿವೃದ್ಧಿಗಾಗಿ ಹಲವಾರು ಯೋಜನೆಗಳನ್ನು ಜಾರಿಗೊಳಿಸುತ್ತಿದೆ. ಆದರೆ, ಈ ಯೋಜನೆಗಳ ಯಶಸ್ಸು ನಮ್ಮೆಲ್ಲರ ಸಹಕಾರದ ಮೇಲೆ ಅವಲಂಬಿತವಾಗಿದೆ. ಪ್ರತಿಯೊಬ್ಬರೂ ತಮ್ಮ ಗ್ರಾಮವನ್ನು ಅಭಿವೃದ್ಧಿಪಡಿಸಲು ಹೊಣೆಗಾರಿಕೆಯಿಂದ ಮುಂದೆ ಬರಬೇಕು.
ಸ್ವಚ್ಛತೆ, ಶಿಕ್ಷಣ ಮತ್ತು ಸ್ವಾವಲಂಬನೆ – ಈ ಮೂರು ಅಂಶಗಳನ್ನು ನಾವು ಗ್ರಾಮಗಳಲ್ಲಿ ಬಲಪಡಿಸಿದರೆ, ನಮ್ಮ ದೇಶವು ವಿಶ್ವದ ಮುಂದಿರುವ ರಾಷ್ಟ್ರಗಳಲ್ಲಿ ಒಂದು ಆಗುತ್ತದೆ ಎಂಬುದರಲ್ಲಿ ಸಂಶಯವೇ ಇಲ್ಲ.
ಕೊನೆಯಲ್ಲಿ, “ಗ್ರಾಮ ಅಭಿವೃದ್ಧಿ ಎಂದರೆ ದೇಶದ ಅಭಿವೃದ್ಧಿ” ಎಂಬ ಸಂದೇಶವನ್ನು ಮನದಲ್ಲಿ ಇಟ್ಟುಕೊಂಡು, ಶಿಬಿರಾರ್ಥಿಗಳು ಸರಿಯಾದ ರೀತಿಯಲ್ಲಿ ಕಾರ್ಯವನ್ನು ನಿರ್ವಹಿಸಿದ್ದೇ ಆದಲ್ಲಿ ಅದರ ಅದರ ಸಾರ್ಥಕತೆ ನಿಮ್ಮಲ್ಲಿ ಉಳಿಯುತ್ತದೆ ಅಂತಹ ಕೆಲಸಕ್ಕೆ ನೀವು ಮುಂದಾಗಬೇಕು ಎಂದು ಎ ಸಿ ಪಾಟೀಲ್ ತಿಳಿಸಿದರು.
ಈ ಸಂದರ್ಭದಲ್ಲಿ ಗಜೇಂದ್ರಗಡ ತಾಲೂಕು ಗ್ಯಾರಂಟಿ ಯೋಜನೆಗಳ ಅಧ್ಯಕ್ಷ ಶರಣಪ್ಪ ಬೆಟಿಗೇರಿ ,ಬಾಳಪ್ಪ ಬುರುಡಿ, ಅಂದನಗೌಡ ಟಿ ಪಾಟೀಲ, ಮಾಹಾದೇಪ್ಪ ಮುಂದಿನಮನಿ ಹಾಗು ಗದಗ್ ಮಹಾತ್ಮ ಗಾಂಧಿ ಗ್ರಾಮೀಣ ಅಭಿವೃದ್ಧಿ ಮತ್ತು ಪಂಚಾಯತ್ ರಾಜ್ ವಿಶ್ವವಿದ್ಯಾಲಯದ ಸಮಸ್ತ ಶಿಬಿರಾರ್ಥಿಗಳು ಪಾಲ್ಗೊಂಡಿದ್ದರು.