Home ಜಿಲ್ಲಾ ಸುದ್ದಿಗಳುಗ್ರಾಮದೇವತೆಯರಿಗೆ ಉಡಿ ತುಂಬಿದ ಭಕ್ತರು

ಗ್ರಾಮದೇವತೆಯರಿಗೆ ಉಡಿ ತುಂಬಿದ ಭಕ್ತರು

by Editor
0 comments

ಚೈತನ್ಯ ನ್ಯೂಸ್ 24 ಮುಳಗುಂದ ಮೇ.23:

ರೈತರು ಉತ್ತಮ ಮಳೆ ಬಂದು ಸಮೃದ್ಧ ಬೆಳೆ ಬರಲಿ ಎಂದು ಬಿತ್ತನೆಗೂ ಮೊದಲು ಜನತೆ ಶುಕ್ರವಾರ ಪ್ರತಿ ವರ್ಷದ ಪದ್ದತಿಯಂತೆ ಗ್ರಾಮ ದೇವತೆ ದೇವಸ್ಥಾನ ಸೇರಿದಂತೆ ಪಟ್ಟಣದ ಎಲ್ಲ ದೇವಾಲಯಗಳಿಗೆ ವಿಶೇಷ ಪೂಜೆ ಸಲ್ಲಿಸಿ ದೇವರಿಗೆ ಉಡಿ ತುಂಬಿದರು.
ಮಹಿಳೆಯರು, ಮಕ್ಕಳು ಹಾಗೂ ರೈತರು ಸೇರಿ ಭಕ್ತಿ ಭಾವದಿಂದ ಬೆಳಗ್ಗೆಯಿಂದ ಗ್ರಾಮ ದೇವತೆ ದೇವಸ್ಥಾನ, ಸಿದ್ದೇಶ್ವರ ದೇವಸ್ಥಾನ, ದುರ್ಗಮ್ಮ ದೇವಿ ದೇವಸ್ಥಾನ, ರೇಣುಕಾ ದೇವಿ ದೇವಸ್ಥಾನ ಸೇರಿದಂತೆ ಪಟ್ಟಣದ ವಿವಿಧ ದೇವಾಲಯಗಳಿಗೆ ತೆರಳಿ ದೇವರಿಗೆ ವಿಶೇಷ ಪೂಜೆ ಸಲ್ಲಿಸಿ, ಉಡಿ ತುಂಬಿ, ಉತ್ತಮ ಮಳೆಯಾಗಿ, ರೈತರ ಬದುಕು ಹಸನಾಗಲಿ ಎಂದು ಪ್ರಾರ್ಥನೆ ಸಲ್ಲಿಸಿದರು.
ಪಟ್ಟಣದಲ್ಲಿ ಧಾರ್ಮಿಕ ವಾತಾವರಣ ನಿರ್ಮಾಣವಾಗಿದ್ದು, ಭಕ್ತರು ದೇವರ ಕೃಪೆಯಿಂದ ಉತ್ತಮ ಬೆಳೆ ಬರಲಿ ಎಂಬ ಆಶಯ ವ್ಯಕ್ತಪಡಿಸಿದರು.
ಈ ವೇಳೆ ರೈತ ಸಂಘದ ಪದಾಧಿಕಾರಿಗಳು, ಹಿರಿಯರು, ಯುವಕರು, ಮಹಿಳೆಯರು, ರೈತರು ಇದ್ದರು.

ಪಟ್ಟಣದ ಸಾರ್ವಜನಿಕರು ಪ್ರತಿ ದೇವಾಲಯಗಳಿಗೆ ಉಡಿ ತುಂಬಲು ಉಡಿ ಸಾಮಾನುಗಳನ್ನು ಹೊತ್ತು ವಾದ್ಯ ಭಜನೆಗಳೊಂದಿಗೆ ಸಾಗುತ್ತಿರುವದು.

You may also like

Leave a Comment

ಸದ್ಗುಣ ಸಚ್ಚಾರಿತ್ರ್ಯದಿಂದ ಬದುಕು ಸಮೃದ್ಧ : ಶ್ರೀ ರಂಭಾಪುರಿ ಜಗದ್ಗುರುಗಳು   ಅಬ್ಬಿಗೇರಿಯಲ್ಲಿ ಕಾರ ಹುಣ್ಣಿಮೆ ಸಂಭ್ರಮ: ಬಿಳಿ ಎತ್ತಿನ ಕರಿ ಮುರಿತ – ಬಿಳಿ ಬೆಳೆಗೆ ಶುಭ ಸಂಕೇತ   ಕರಿ ಹರಿದ ಬಿಳಿ ಎತ್ತು: ಊರಿಗೇ ಒಲಿದ ಅದೃಷ್ಟ, ಈ ಬಾರಿ ಬಂಪರ್ ಬೆಳೆ ನಿಶ್ಚಿತ!   ಜೀವನದಲ್ಲಿ ಗುರಿಯಿರಲಿ ಉರಿ ಬೇಡ : ಶ್ರೀ ರಂಭಾಪುರಿ ಜಗದ್ಗುರುಗಳು   ಶ್ರೀ ರಂಭಾಪುರಿ ಜಗದ್ಗುರುಗಳವರ ಜುಲೈ ಮಾಹೆಯ ಪ್ರವಾಸ