ಚೈತನ್ಯ ನ್ಯೂಸ್ ೨೪ ಮುಳಗುಂದ: ಜೂ.2:
ಸ್ಥಳೀಯ ಪಪಂನಿ0ದ ೨೦೧೨ರಿಂದ ಕಡುಬಡವರಿಗೆ, ನಿರ್ಗತಿಕರಿಗೆ ಹಂಚಿಕೆಯಾಗಬೇಕಿದ್ದ ನಿವೇಶನಗಳು ಇಂದಿಗೂ ಹಂಚಿಕೆಯಾಗದಿರುವದನ್ನು ಖಂಡಿಸಿ ಪಟ್ಟಣದ ಮಹಿಳೆಯರು ಪಪಂ ಕಾರ್ಯಾಲಯಕ್ಕೆ ಮುತ್ತಿಗೆ ಹಾಕಿ ಆಕ್ರೋಶ ವ್ಯಕ್ತಪಡಿಸಿದರು.
ಕಳೆದ ಹದಿನೈದು ವರ್ಷಗಳಿಂದ ನೆನೆಗುದಿಗೆ ಬಿದ್ದಿದ್ದ ನಿವೇಶನ ಹಂಚಿಕೆ ಸದಸ್ಯರ ಆಡಳಿತಾವಧಿಯಲ್ಲಿ ಹಂಚಿಕೆಯಾಗಲಿಲ್ಲ. ಬಂದ ೪೦೦೦ ಅರ್ಜಿಗಳ ಪೈಕಿ ೩೭೩ ಫಲಾನುಭವಿಗಳ ಹೆಸರು ಈ ತಾತ್ಕಾಲಿಕ ಪಟ್ಟಿ ಹಚ್ಚಲಾಗಿತ್ತು. ಆದರೆ ಸರಿಯಾಗಿ ಹಂಚಿಕೆಯಾದ್ದರಿ0ದ ತಟಸ್ಥ ಉಳಿಸುವಂತಾಯಿತು. ಆದರೆ ಉಸ್ತುವಾರಿ ಮಂತ್ರಿಗಳು ಪರಿಶೀಲನೆ ನಡೆಸಿ ಹಂಚಿಕೆ ಮಾಡುವಂತೆ ಜಿಲ್ಲಾಧಿಕಾರಿ, ಆಡಳಿತಾಧಿಕಾರಿ ಹಾಗೂ ಮುಖ್ಯಾಧಿಕಾರಿಗಳಿಗೆ ಸೂಚನೆ ನೀಡಿದ್ದರು. ಅವರ ಸೂಚನೆಯ ಪ್ರಕಾರ ಪರಿಶೀಲನೆ ನಡೆಸಲಾಯಿತು. ಆದರೆ ಹಂಚಿಕೆ ಕಾರ್ಯ ಮಾತ್ರ ಮಾಡಲಿಲ್ಲ. ಇದರಿಂದ ರೊಚ್ಚಿಗೆದ್ದ ಸಾರ್ವಜನಿಕ ಮಹಿಳೆಯರು ಕಳೆದ ವಾರ ಪಪಂಗೆ ಬಂದಾಗ ಮುಖ್ಯಾಧಿಕಾರಿ ಸೋಮವಾರ ಬರುವಂತೆ ತಿಳಿಸಿದ್ದರು. ಆದರೆ ಇಂದು ಬಂದರೆ ಮುಖ್ಯಾಧಿಕಾರಿಯೇ ಕಾರ್ಯಾಲಯದಲಿಲ್ಲ.
ಕಳೆದ ಕೆಲ ವರ್ಷಗಳಿಂದ ನಾವು ಹೀಗೆಯೇ ಕಾರ್ಯಾಲಯಕ್ಕೆ ಸುತ್ತಿ ಸಾಕಾಗಿದೆ. ಆದರೆ ಅಂದು ಬಾ ಇಂದು ಬಾ ಎಂದು ಹೇಳುತ್ತಿದ್ದು ನಿವೇಶನ ರಹಿತರ ಬಗ್ಗೆ ಇವರಿಗೆ ಕಾಳಜಿಯೇ ಇಲ್ಲವಾಗಿದೆ. ಇದರಿಂದ ಪಟ್ಟಣದಲ್ಲಿ ಅಸಹನೆಯ ವಾತಾವರಣ ನಿರ್ಮಾಣವಾಗಿದೆ.
ಈ ಹಿಂದೆ ಒಂದು ಪಟ್ಟಿ ಸದಸ್ಯರುಗಳಿದ್ದಾಗ ರೆಡಿಯಾಗಿತ್ತು. ಆದರೆ ಹಂಚಿಕೆಯಾದ ನಿವೇಶನಗಳು ಮನೆಯಿದ್ದವರಿಗೆ ನಿವೇಶನ, ಎರಡ್ಮೂರು ಅಂತಸ್ಥಿನ ಕಟ್ಟಡವಿದ್ದವರಿಗೆ ನಿವೇಶನ, ಒಂದೇ ಮನೆಯಲ್ಲಿ ಎರಡ್ಮೂರು ನಿವೇಶನ, ಮನೆಯಿದ್ದರೂ ಸದಸ್ಯರ ಹಿಂಬಾಲಕರಿಗೆ ನಿವೇಶನ, ಸದಸ್ಯರ ಸೊಸೆಯಂದಿರಿಗೆ ಹಾಗೂ ಸದಸ್ಯರ ಹೆಂಡತಿಯರಿಗೆ ನಿವೇಶನ ಹೀಗೆ ಸರಕಾರದ ನೀತಿ ನಿಯಮ ಗಾಳಿಗೆ ತೂರಿ ಅವೈಜ್ಞಾನಿಕವಾಗಿ ಹಂಚಿಕೆ ಮಾಡಲಾಗಿತ್ತು. ನಿವೇಶನ ಪಡೆಯಬೇಕಿದ್ದ ಬಡವರಿಗೆ ಹಂಚಿಕೆ ಮಾಡಿಲ್ಲ. ಎಂದು ಆರೋಪಿಸಿದರು.
ಈ ನಿವೇಶನಗಳಿಗೆ ೨೦೧೨ರಲ್ಲಿ, ೨೦೧೭ರಲ್ಲಿ ೨೦೨೪ರಲ್ಲಿ ಹೀಗೆ ಅರ್ಜಿ ಸಲ್ಲಿಸಿಯಾಗಿವೆ. ಹೀಗೆ ಅನೇಕ ಬಾರಿ ಅರ್ಜಿ ಸಲ್ಲಿಸಿ ಸಾವಿರಾರು ರೂ. ಖರ್ಚು ಮಾಡಿಕೊಂಡಿದ್ದೇವೆ. ನಮಗೆ ಮನೆಯಿಲ್ಲದೇ ಬಾಡಿಗೆ ಮನೆಯಲ್ಲಿದ್ದೇವೆ. ಬಾಡಿಗೆ ಮನೆಯ ವಾಸ ತಪ್ಪಿಸಿ ಎಂದರು.
ಮುಖ್ಯಾಧಿಕಾರಿಗಳಿಗೆ ಫೋನ್ ಮಾಡಿದರೆ ಬೆಂಗಳೂರಗೆ ಹೋಗಿರುವದಾಗಿ ಶುಕ್ರವಾರ ಬರಲು ಹೇಳಿದ್ದಾರೆ. ಶುಕ್ರವಾರ ಇನ್ನೂ ಹೆಚ್ಚು ಮಹಿಳೆಯರು ಸೇರಿ ಹೋರಾಟಕ್ಕಿಳಿಯುವದಾಗಿ ಎಚ್ಚರಿಕೆ ನೀಡಿದ್ದಾರೆ.
ಬಾಕ್ಸ:
೨೦೧೨ರಿಂದ ಬಾಡಿಗೆ ಮನೆಯಲ್ಲಿದ್ದೇವೆ. ಅಂದಿನಿAದ ಅರ್ಜಿ ಸಲ್ಲಿಸುತ್ತಿದ್ದೇವೆ. ದುಡಿಮೆ ಬಿಟ್ಟು ಕಾರ್ಯಾಲಯಕ್ಕೆ ಅಲೆದು ಸಾಕಾಗಿದೆ. ಈ ಬಾರಿ ಪಟ್ಟಿಯಲ್ಲಿ ನನ್ನ ಹೆಸರು ಬಂದರೂ ನಿವೇಶನ ನೀಡಲಿಲ್ಲ.
-ಯಾಸ್ಮಿನ್ ಬೇಗಂ ಇಬ್ರಾಹಿಂಸಾಬ ಮಕಾಂದಾರ ವಾರ್ಡ ನಂ ೧೭ರ ಮಹಿಳೆ.
ನಿವೇಶನ ಹಂಚಿಕೆಗೆ ಆಗ್ರಹಿಸಿ ಪಪಂಗೆ ಮಹಿಳೆಯರಿಂದ ಮುತ್ತಿಗೆ
46
previous post