ಚೈತನ್ಯ ನ್ಯೂಸ್ ೨೪ ಮುಳಗುಂದ: ಜೂ.2:
ಪ್ರಾಥಮಿಕ ಶಿಕ್ಷಣ ಮಕ್ಕಳ ಭವಿಷ್ಯಕ್ಕೆ ಭದ್ರ ಬುನಾದಿಯಾಗಿದೆ ಎಂದು ಎಸ್ಡಿಎಂಸಿ ಅಧ್ಯಕ್ಷ ವಿ.ಡಿ. ಸಿದ್ದನಗೌಡ್ರ ಹೇಳಿದರು.
ಅವರು ಪಟ್ಟಣದ ಸರಕಾರಿ ಮಾದರಿ ಕನ್ನಡ ಗಂಡು ಮಕ್ಕಳ ಶಾಲೆ ನಂ೧ರಲ್ಲಿ ೨೦೨೬/೨೭ನೇ ಸಾಲಿನ ಶೈಕ್ಷಣಿಕ ವರ್ಷದ ಶಾಲಾ ಪ್ರಾರಂಭೋತ್ಸವದಲ್ಲಿ ಮಕ್ಕಳಿಗೆ ಗುಲಾಬಿ ಹೂವು ಹಾಗೂ ಸಿಹಿ ಹಂಚಿ ಮಾತನಾಡಿ ಪ್ರತಿಯೊಬ್ಬ ಮಗುವಿಗೂ ಶಿಕ್ಷಣ ಕೊಡಿಸುವುದು ಪಾಲಕರ ಪೋಷಕರ ಜವಾಬ್ದಾರಿಯಾಗಿದ್ದು ೪ ವರ್ಷ ತುಂಬಿದ ಮಗುವಿಗೆ ಎಲ್ಕೆಜಿ, ೫ ವರ್ಷದ ಮಗುವಿಗೆ ಯುಕೆಜಿ, ೫ ವರ್ಷ ೧೦ ತಿಂಗಳಾದ ಮಗುವಿಗೆ ೧ನೇ ತರಗತಿಗೆ ಅವಕಾಶವಿದ್ದು, ಪಾಲಕರು ತಮ್ಮ ಮಕ್ಕಳನ್ನು ಸರಕಾರಿ ಶಾಲೆಗೆ ದಾಖಲಾತಿ ಮಾಡಿಸಿ ಮಕ್ಕಳ ಭಾವಿ ಭವಿಷ್ಯಕ್ಕೆ ಭದ್ರ ಬುನಾದಿ ಹಾಕಲು ಸಹಕರಿಸಬೇಕು ಎಂದರು.
ಈ ಸಂದರ್ಭದಲ್ಲಿ ಮಕ್ಕಳಿಗೆ ಸರಕಾರದಿಂದ ಕೊಡಮಾಡಲ್ಪಟ್ಟ ಪುಸ್ತಕ ವಿತರಣೆ ಮಾಡಲಾಯಿತು. ಶಾಲಾ ಪ್ರಧಾನ ಗುರುಮಾತೆ ಎಲ್.ಎ. ನಡುವಿನಮನಿ, ಪಿ.ಬಿ. ಕೆಂಚನಗೌಡ್ರ, ಕೆ.ಎಂ. ಹೇರಕಲ್. ಎಂ.ಎA. ಮೇಗಲಮನಿ, ಎಸ್.ಎಸ್. ಹುಣಶಿಮರದ, ಸಿದ್ದಲಿಂಗೇಶ ಶಿರಕೋಳ, ಎಚ್.ಆರ್. ಭಜೆಂತ್ರಿ, ಎಸ್.ವಿ. ಹಿರೇಮಠ, ಎಸ್.ಡಿ. ಪಂಡಿತ, ಶೈಲಾ ದೊಡ್ಡಮನಿ, ತ್ರಿವೇಣಿ ಬಡ್ನಿ, ಟಿ.ವೀಣಾ, ವಿ.ಎಂ.ಕAಠಿ, ರತ್ನಾ ಬಬಲಿ, ವಿದ್ಯಾ ಹಾಳಕೇರಿ, ರೂಪಾ ಬಗಾಡೆ, ಸಂಕಮ್ಮಾ ಯಳವತ್ತಿ, ಲಕ್ಷಿö್ಮ ಬೇಂದ್ರೆ, ಮಂಜುನಾಥ ಗುಲಗಂಜಿ, ಅನ್ವರ ನದ್ದಿಮುಲ್ಲಾ, ಜಿ.ಎಂ. ಗಾಡಿ ದತ್ತಪ್ಪ ಯಳವತ್ತಿ ಇತರರು ಇದ್ದರು.