Home ಜಿಲ್ಲಾ ಸುದ್ದಿಗಳುಶ್ರೀ ದತ್ತ ದೇವಸ್ಥಾನದಲ್ಲಿ ಅಧಿಕ ಮಾಸದ ಭಜನೆ ಸಂಪನ್ನ

ಶ್ರೀ ದತ್ತ ದೇವಸ್ಥಾನದಲ್ಲಿ ಅಧಿಕ ಮಾಸದ ಭಜನೆ ಸಂಪನ್ನ

by Editor
0 comments

ಚೈತನ್ಯ ನ್ಯೂಸ್‌ 24 ಜೂ.19:

ಕಳೆದ ಒಂದು ತಿಂಗಳಿನಿAದ ಸಾಗಿ ಬಂದ ಅಧಿಕ ಮಾಸದ ಭಜನೆಯನ್ನು ಪಟ್ಟಣದ ಅನಸೂಯಾ ಮಹಿಳಾ ಮಂಡಳದವರು ನಿನ್ನೆಯ ದಿನ ಶ್ರೀ ದತ್ತಾತ್ರೇಯ ದೇವಸ್ಥಾನದಲ್ಲಿ ಸಂಪನ್ನಗೊಳಿಸಿದರು.
ಅಧಿಕ ಮಾಸದಲ್ಲಿ ನೀಡುವ ದಾನ, ಮಾಡುವ ಭಜನೆ ಇತ್ಯಾದಿ ಎಲ್ಲವೂ ಅಧಿಕವಾಗುತ್ತದೆ. ನಮ್ಮ ಹಿರಿಯರು ಮಾಡಿರುವ ಆಚರಣೆಗಳೆಲ್ಲವೂ ಸಮರ್ಪಕವಾಗಿದ್ದು ಅವುಗಳನ್ನು ನಾವು ಆಚರಿಸುವುದರಿಂದ ನಮ್ಮ ಮನೆಗಳಲ್ಲಿ ಶಾಂತಿ, ನೆಮ್ಮದಿ ಲಭಿಸುತ್ತದೆ. ಅಲ್ಲದೆ ನಾವು ನೀಡಿರುವ ದಾನ ಇತ್ಯಾದಿ ಎಲ್ಲವೂ ಅಧಿಕವಾಗುತ್ತದೆ. ಈ ಒಂದು ತಿಂಗಳ ಪರ್ಯಂತ ನಮ್ಮ ಅನಸೂಯಾ ಮಹಿಳಾ ಮಂಡಳದವರೆಲ್ಲರೂ ಸೇರಿ ದೇವಸ್ಥಾನ ಮತ್ತು ಮನೆಗಳಲ್ಲಿ ಮಾಡಿದ ಭಜನೆಯು ನಮಗೆಲ್ಲರಿಗೂ ಸಂಪೂರ್ಣ ತೃಪ್ತಿಯನ್ನು ತಂದಿದೆ ಎಂದು ಸಂಧ್ಯಾ ಕುಲಕರ್ಣಿ ತಿಳಿಸಿದರು.
ನಿಖಿತಾ ಗ್ರಾಮಪುರೋಹಿತ ಅಧಿಕ ಮಾಸದ ಕಥಾಮೃತವನ್ನು ಓದಿದರು. ೩೩ ಹಾಡುಗಳನ್ನು ಹಾಡಿದ ಮಹಿಳೆಯರು ನಂತರ ಕೋಲಾಟವನ್ನು ಆಡಿ ನಲಿದರು. ಈ ಸಂದರ್ಭದಲ್ಲಿ ಭಾರತಿಬಾಯಿ ಗ್ರಾಮಪುರೋಹಿತ, ಅರ್ಚನಾ ಕುಲಕರ್ಣಿ, ಜಯಶ್ರೀ ಗ್ರಾಮಪುರೋಹಿತ, ಪದ್ಮಾ ಕುಲಕರ್ಣಿ, ರಾಜಶ್ರೀ ಕುಲಕರ್ಣಿ, ಡಾ. ಸಪ್ನಾ ಕಾಳೆ, ಸನ್ಮತಿ ಸದರಜೋಷಿ, ಅನಿತಾ ಗ್ರಾಮಪುರೋಹಿತ, ದೀಪಾ ಕುಲಕರ್ಣಿ, ಪರಿಮಳಾ ಗ್ರಾಮಪುರೋಹಿತ, ಶೋಭಾ ಸೂರಭಟ್ಟನವರ, ವಿದ್ಯಾ ಗ್ರಾಮಪುರೋಹಿತ, ಸುಪ್ರಿಯಾ ಉಡುಪಿ, ಸೀಮಾ ಕೊಂಡಿ, ಪ್ರತೀಕ್ಷಾ ಕುಲಕರ್ಣಿ, ಶ್ವೇತಾ ಕಾಳೆ, ಜ್ಯೋತಿ ನಾಡಿಗೇರ, ಸುಮಾ ಉಡುಪಿ, ಭಾಗ್ಯಾಬಾಯಿ ಕಾಳೆ, ರೇಣುಕಾ ಗ್ರಾಮಪುರೋಹಿತ, ಕಮಲಾಬಾಯಿ ಸದರಜೋಷಿ, ವೇದಾ ಸದರಜೋಷಿ ಮತ್ತಿತರರು ಇದ್ದರು.
ಫೋಟೋ ಶೀರ್ಷಿಕೆ: ಪಟ್ಟಣದ ಶ್ರೀ ದತ್ತಾತ್ರೇಯ ದೇವಸ್ಥಾನದಲ್ಲಿ ಅನಸೂಯಾ ಮಹಿಳಾ ಮಂಡಳದವರು ೩೩ ಹಾಡುಗಳನ್ನು ಹಾಡಿ ಅಧಿಕ ಮಾಸವನ್ನು ಸಂಪನ್ನಗೊಳಿಸಿದರು.

You may also like

Leave a Comment

ಸದ್ಗುಣ ಸಚ್ಚಾರಿತ್ರ್ಯದಿಂದ ಬದುಕು ಸಮೃದ್ಧ : ಶ್ರೀ ರಂಭಾಪುರಿ ಜಗದ್ಗುರುಗಳು   ಅಬ್ಬಿಗೇರಿಯಲ್ಲಿ ಕಾರ ಹುಣ್ಣಿಮೆ ಸಂಭ್ರಮ: ಬಿಳಿ ಎತ್ತಿನ ಕರಿ ಮುರಿತ – ಬಿಳಿ ಬೆಳೆಗೆ ಶುಭ ಸಂಕೇತ   ಕರಿ ಹರಿದ ಬಿಳಿ ಎತ್ತು: ಊರಿಗೇ ಒಲಿದ ಅದೃಷ್ಟ, ಈ ಬಾರಿ ಬಂಪರ್ ಬೆಳೆ ನಿಶ್ಚಿತ!   ಜೀವನದಲ್ಲಿ ಗುರಿಯಿರಲಿ ಉರಿ ಬೇಡ : ಶ್ರೀ ರಂಭಾಪುರಿ ಜಗದ್ಗುರುಗಳು   ಶ್ರೀ ರಂಭಾಪುರಿ ಜಗದ್ಗುರುಗಳವರ ಜುಲೈ ಮಾಹೆಯ ಪ್ರವಾಸ