Home ಜಿಲ್ಲಾ ಸುದ್ದಿಗಳುಬಿಎಸ್‌ವೈ ಅಭಿಮಾನೋತ್ಸವ ಪೂರ್ವಭಾವಿ ಸಭೆ

ಬಿಎಸ್‌ವೈ ಅಭಿಮಾನೋತ್ಸವ ಪೂರ್ವಭಾವಿ ಸಭೆ

by Editor
0 comments

ಚೈತನ್ಯ ನ್ಯೂಸ್ 24 ಗಜೇಂದ್ರಗಡ ಮೇ. 08:

ನಾಡು ಕಂಡ ಧೀಮಂತ ನಾಯಕ, ರೈತರ ಪರ ಹೋರಾಟಗಾರ ಮಾಜಿ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪನವರು ರಾಜ್ಯಕ್ಕೆ ನೀಡಿದ ಕೊಡುಗೆ ಅಪಾರವಾಗಿದೆ ಎಂದು ಮಾಜಿ ಶಾಸಕ ಕಳಕಪ್ಪ ಬಂಡಿ ಹೇಳಿದರು.

ಪಟ್ಟಣದ ಬಿಜೆಪಿ ಕಾರ್ಯಾಲಯದಲ್ಲಿ ಭಾರತೀಯ ಜನತಾ ಪಾರ್ಟಿ ರೋಣ ಮಂಡಲದ ವತಿಯಿಂದ ಹಮ್ಮಿಕೊಂಡಿದ್ದ ಬಿ.ಎಸ್. ಯಡಿಯೂರಪ್ಪನವರ ಅಭಿಮಾ ನೋತ್ಸವದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದ ಅವರು, ಮೇ 9ರಂದು ಚಿತ್ರದುರ್ಗದಲ್ಲಿ ನಡೆಯುವ ಬಿ.ಎಸ್. ಯಡಿಯೂರಪ್ಪ ಅಭಿಮಾನೋತ್ಸವದ ಅದ್ದೂರಿ ಸಮಾರಂಭದಲ್ಲಿ ಅಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಯಶಸ್ವಿ ಗೊಳಿಸಬೇಕೆಂದು ಮನವಿ ಮಾಡಿದರು.

ಇದೇ ಸಂದರ್ಭದಲ್ಲಿ ವಾಹನಗಳ ಸ್ಟಿಕರ್ ಹಾಗೂ ಆಮಂತ್ರಣ ಪತ್ರಿಕೆಗಳನ್ನು ಬಿಡುಗಡೆಗೊಳಿಸಿದರು. ಬಿಜೆಪಿ ರೋಣ ಮಂಡಲ ಅಧ್ಯಕ್ಷ ಉಮೇಶ ಮಲ್ಲಾಪೂರ, ಮುದಿಯಪ ಕರಡಿ, ಶಿವಾನಂದ ಮಠದ, ದಾನು ರಾಠೋಡ, ಬಸವರಾಜ ಬಂಕದ, ಬಾಲಾಜಿರಾವ್ ಭೋಸಲೆ, ನೀಲಪ್ಪ ಗುರಿಕಾರ, ಮಾಹಾಂತೇಶ ಪೂಜಾರ, ರಂಗನಾಥ್ ಮೇಟಿ, ಹುಲ್ಲಪ್ಪ ಕೆಂಗಾರ, ಭೀಮಪ್ಪ ಮಾದರ, ರವಿ ಸಿಂಗ್ರಿ, ಸಲಿಂ ಕಲಾದಗಿ, ಬಸಬರಾಜ ಕಡಬಲಕಟ್ಟಿ, ಉಮೇಶ ಅಡನೂರ, ಯು.ಆರ್ ಚನ್ನಮ್ಮನವರ, ಈರಪ್ಪ ಯರಗೇರಿ, ಮಲ್ಲಪ್ಪ ಕುರಿ, ಲಕ್ಷ್ಮಣ ಬಂಕದ, ಮಹೇಶ ಮಕ್ತಾಲಿ, ಶಂಕರ ಇಂಜನಿ, ಪರಸಪ್ಪ ಪೂಜಾರ, ಸೂಗುರೇಶ ಕಾಜಗಾರ, ಕಿರಣ್ ಕಟ್ಟಿ ಇದ್ದರು.

You may also like

Leave a Comment

➤ ಶ್ರೀ ರಂಭಾಪುರಿ ಜಗದ್ಗುರುಗಳವರ ಸಪ್ಟಂಬರ್ ಮಾಹೆಯ ಪ್ರವಾಸ    ➤ ಅಬ್ಬಿಗೇರಿ ಶ್ರೀ ಬಯಲು ಬಸವೇಶ್ವರ ದೇವಸ್ಥಾನದಲ್ಲಿ ಸನ್ಮಾನ್ಯ ಜಿ.ಎಸ್. ಪಾಟೀಲರಿಂದ ಪೂಜೆ ಸಲ್ಲಿಕೆ.   ➤    ➤ ಗಣೇಶೋತ್ಸವಕ್ಕೆ ಕಟ್ಟುನಿಟ್ಟಿನ ನಿಯಮ: ಡಿಜೆ ಸಂಪೂರ್ಣ ನಿಷೇಧ:ಶಾಂತಿಯುತ ಆಚರಣೆಗೆ ಆದ್ಯತೆ ನೀಡಿ : ಪಿ ಎಸ್ ಐ ಐಶ್ವರ್ಯ ನಾಗರಾಳ    ➤ ಜೀವನದಲ್ಲಿ ಆಸಕ್ತಿ ಕಳೆದುಕೊಂಡು ಬಾಳಬಾರದು : ಶ್ರೀ ರಂಭಾಪುರಿ ಜಗದ್ಗುರುಗಳು