ಚೈತನ್ಯ ನ್ಯೂಸ್ 24 ಗಜೇಂದ್ರಗಡ: ಮೇ.11
ತಾಲೂಕಿನ ಹೇಮರೆಡ್ಡಿ ಮಲ್ಲಮ್ಮ ಸಮಾಜದಿಂದ ಆಯೋಜಿಸಿದ್ದ ಮಹಾಸಾದ್ವಿ ಹೇಮರೆಡ್ಡಿ ಮಲ್ಲಮ್ಮನ 604ನೇ ಜಯಂತಿಯನ್ನು ಶ್ರದ್ಧಾಭಕ್ತಿಯಿಂದ ಆಚರಣೆಯನ್ನು ಮಲ್ಲಮ್ಮನ ಭಾವಚಿತ್ರಕ್ಕೆ ಪುಷ್ಪ ಹಾಕುವ ಮೂಲಕ ಆಚರಣೆ ಮಾಡಲಾಯಿತು.
ರೋಣ ತಾಲೂಕು ಗ್ಯಾರಂಟಿ ಅನುಷ್ಠಾನ ಸಮಿತಿಯ ಅಧ್ಯಕ್ಷ ಮಿಥುನ ಪಾಟೀಲ ಮಾತನಾಡಿ, ಮಲ್ಲಮ್ಮಸಾರಿದದಾನ, ಧರ್ಮ ಮತ್ತು ಭಕ್ತಿಯ ಹಾದಿಯನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು. 14ನೇ ಶತಮಾನದಲ್ಲಿಯೇ ಸಂಸಾರದಲ್ಲಿದ್ದುಕೊಂಡು ಪರಮಾರ್ಥವನ್ನು ಸಾಧಿಸಿ, ಮಹಿಳೆಯರಿಗೆ ಆದರ್ಶಪ್ರಾಯರಾದ ಅವರ ವ್ಯಕ್ತಿತ್ವವು ಇಂದಿನ ಸಮಾಜದಲ್ಲಿನ ಮಾನವರಿಗೆ ಮಾದರಿಯಾಗಿದೆ. ಮಲ್ಲಮ್ಮನವರು ಸಮಾಜ ಸುಧಾರಣೆಯಲ್ಲಿ ಯಾವುದೇ ಜಾತಿ, ಮತ ಭೇದವಿಲ್ಲದೆ ಎಲ್ಲರನ್ನೂ ಪ್ರೀತಿಸಬೇಕು ಹಾಗೂ ದಾಸೋಹ ಮಾಡುವ ಗುಣ ಬೆಳಸಿಕೊಳ್ಳಬೇಕೆಂದ ಸಂದೇಶವನ್ನು ಇಡೀ ಜಗತ್ತಿಗೆ ಸಾರಿ ಹೋಗಿದ್ದಾರೆ. ಮಲ್ಲಮ್ಮರ ಜೀವನ ಕೇವಲ ಪುರಾಣಕ್ಕೆ ಸೀಮಿತವಾಗದೆ, ಪ್ರತಿಯೊಬ್ಬರೂ ಜೀವನದಲ್ಲಿ ಅಳವಡಿಕೊಳ್ಳಬೇಕಾದ ಸಂಸ್ಕಾರದ ಹಾದಿಯಾಗಬೇಕು ಎಂದರು. ವೀರಪ್ಪ ದೇವರೆಡ್ಡಿ, ಪ್ರಸನ್ನ ಪಾಟೀಲ, ಸಂತೋಷ ಹುಚ್ಚರೆಡ್ಡಿ, ಸುರೇಶ ಸಿದ್ದರೆಡ್ಡಿ, ಎಸ್.ಎಸ್. ರೆಡ್ಡೆರ, ಗಂಗಾಧರ ಬಯ್ಯಾಪೂರ, ಬಸಣ್ಣ ಶಿರೋಳ, ದೇವಣ್ಣ ದೇವರೆಡ್ಡಿ, ಶಿಕ್ಷಕ ಜೋಗರೆಡ್ಡಿ ಇದ್ದರು.