Home ಜಿಲ್ಲಾ ಸುದ್ದಿಗಳುಆರೋಗ್ಯವಂತ ತಾಯಿಗೆ ಪ್ರಸವಪೂರ್ವ ತಪಾಸಣೆ ಅವಶ್ಯ: ಆರೋಗ್ಯಾಧಿಕಾರಿ ಕೆ ಎ ಹಾದಿಮನಿ

ಆರೋಗ್ಯವಂತ ತಾಯಿಗೆ ಪ್ರಸವಪೂರ್ವ ತಪಾಸಣೆ ಅವಶ್ಯ: ಆರೋಗ್ಯಾಧಿಕಾರಿ ಕೆ ಎ ಹಾದಿಮನಿ

by Editor
0 comments

ಚೈತನ್ಯ ನ್ಯೂಸ್ 24 ಗಜೇಂದ್ರಗಡ: ಮೇ.13:

ಗದಗ ಜಿಲ್ಲೆ ಗಜೇಂದ್ರಗಡ ತಾಲೂಕಿನ ಪ್ರಾಥಮಿಕ ಆರೋಗ್ಯ ಕೇಂದ್ರ ಶಾಂತಗೇರಿಯಲ್ಲಿ ಪ್ರಧಾನ ಮಂತ್ರಿ ಸುರಕ್ಷಿತ ಮಾತ್ರತ್ವ ಅಭಿಯಾನ ಕಾರ್ಯಕ್ರಮ ಜರಗಿತು
ಕಾರ್ಯಕ್ರಮದಲ್ಲಿ ತಾಲೂಕ ಆರೋಗ್ಯಾಧಿಕಾರಿ ಕೆ ಎ ಹಾದಿಮನಿ ಮಾತಾನಾಡಿ, ಬಾಲ್ಯ ವಿವಾಹ ಹದಿ ಹರೆಯದ ಗರ್ಭಾವಸ್ಥೆಯನ್ನು ತಡೆಗಟ್ಟಿ ಹೆಣ್ಣು ಮಗುವಿಗೆ ಶಿಕ್ಷಣ ನೀಡಿ ಆರೋಗ್ಯವಂತ ಮಹಿಳೆಯಿಂದ ಆರೋಗ್ಯವಂತ ಮಗುವನ್ನು ನಿರೀಕ್ಷಿಸಲು ಸಾಧ್ಯ ಮಹಿಳೆ ಗರ್ಭಿಣಿ ಎಂದು ತಿಳಿದ ತಕ್ಷಣ ಸರ್ಕಾರಿ ಆಸ್ಪತ್ರೆಯಲ್ಲಿ ನೋಂದಾಯಿಸಿಕೊಂಡು ಪ್ರಸವಪೂರ್ವ ಆರೈಕೆ ಪಡೆದುಕೊಂಡಲ್ಲಿ ತಾಯಿ ಮರಣದಂತ ಗಂಡಾಂತರವನ್ನು ತಡೆಗಟ್ಟಬಹುದು ಎಂದು ಅವರು  ಹೇಳಿದರು
ಪ್ರಾಥಮಿಕ ಆರೋಗ್ಯ ಕೇಂದ್ರ ಶಾಂತಗೆರಿಯಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ , ಜಿಲ್ಲಾ ಸಂತಾನೋತ್ಪತ್ತಿ ಮತ್ತು ಮಕ್ಕಳ ಆರೋಗ್ಯ ವಿಭಾಗ ಜಿಲ್ಲಾ ಮಾಹಿತಿ ಶಿಕ್ಷಣ ಸಂವಹನ ವಿಭಾಗ ಗದಗ ತಾಲೂಕ ಆರೋಗ್ಯ ಅಧಿಕಾರಿಗಳ ಕಾರ್ಯಾಲಯ ರೋಣ ಪ್ರಾಥಮಿಕ ಆರೋಗ್ಯ ಕೇಂದ್ರ ಶಾಂತಗೇರಿಯ ಸಂಯುಕ್ತ ಆಶ್ರಯದಲ್ಲಿ ಜರುಗಿದ ಪ್ರಧಾನ ಮಂತ್ರಿ ಸುರಕ್ಷಿತ ಮಾತೃತ್ವ ಅಭಿಯಾನ ಕಾರ್ಯಕ್ರಮ ಉದ್ದೇಶಿ ಮಾತನಾಡಿದರು.

ಹೆಣ್ಣು ಮಗುವನ್ನು ರಕ್ಷಿಸಿ ಹೆಣ್ಣು ಮಗುವನ್ನು ಓದಿಸಿ ಎನ್ನುವ ಧ್ಯೇಯ ವಾಕ್ಯದಂತೆ ಹೆಣ್ಣು ಮಗು ಎಂದು ತಕ್ಷಣ ಮೊದಲು ಮದುವೆಯಲ್ಲ ಮೊದಲು ಶಿಕ್ಷಣ ನೀಡಿ ಹೆಣ್ಣು ಮಗುವನ್ನು ಓದಿಸಿ ಅವಳು ಸ್ವಾಲಂಬಿಯಾದ ನಂತರ ಮದುವೆ ಮಾಡಿ ಗರ್ಭಿಣಿ ಎಂದು ತಿಳಿದು ತಕ್ಷಣ ಸರ್ಕಾರಿ ಆಸ್ಪತ್ರೆಯಲ್ಲಿ ನೊಂದಾಯಿಸಿಕೊಂಡು ಸರಿಯಾದ ಸೇವೆ ಪಡೆದುಕೊಂಡಲ್ಲಿ ತಾಯಿ ಮರಣದಂತ ಅಪಾಯಗಳನ್ನು ತಪ್ಪಿಸಿ ಸುರಕ್ಷಿತ ತಾಯಿ ಸುರಕ್ಷಿತ ಮಗು ಪಡೆಯಬಹುದು ಎಂದು ಅವರು ಹೇಳಿದರು
ಕಾರ್ಯಕ್ರಮದಲ್ಲಿ ಇನ್ನೋರ್ವ ಅತಿಥಿಗಳಾದ ಪ್ರಾಥಮಿಕ ಸುರಕ್ಷಾ ಅಧಿಕಾರಿ ಸಿ ಎ ಶಿರಹಟ್ಟಿ ಮಾತನಾಡಿ, ಗರ್ಭಾವಸ್ಥೆಯಲ್ಲಿ ಗರ್ಭಿಣಿ ತಾಯಂದಿರು ನಿಯಮಿತವಾದ ವೈದ್ಯಕೀಯ ತಪಾಸಣೆಯ ಜೊತೆಗೆ ಪೌಷ್ಟಿಕ ಆಹಾರದ ಕಡೆ ಗಮನ ಕೊಡಬೇಕು ಮೊಳಕೆ ಕಟ್ಟಿದ ಕಾಳುಗಳು ಸೊಪ್ಪು ತರಕಾರಿ ಹಣ್ಣುಗಳ ಸೇವನೆ ಕಬ್ಬಿಣ ಮತ್ತು ಕ್ಯಾಲ್ಸಿಯಂ ಅಂಶದ ಪೂರಕ ಆಹಾರ ಸೇವಿಸುವದರ ಜೊತೆಗೆ ತಮ್ಮ ಆರೋಗ್ಯದ ಬಗ್ಗೆ ನಿಗಾವಣಿ ವಹಿಸಿಕೊಂಡಲ್ಲಿ ಸುರಕ್ಷಿತ ಮಗುವನ್ನು ಪಡೆಯುವದರ ಜೊತೆಗೆ ಸುರಕ್ಷಿತ ತಾಯ್ತನವನ್ನು ನಿಭಾಯಿಸಿಕೊಳ್ಳಬಹುದು ಅವರು ಹೇಳಿದರು
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪ್ರಾಥಮಿಕ ಆರೋಗ್ಯ ಕೇಂದ್ರ ಶಾಂತಗೇರಿಯ ಆಡಳಿತ ವೈದ್ಯಾಧಿಕಾರಿಗಳಾದ ಡಾ. ಬಸವನಗೌಡ ಪವಾಡಿಗೌಡರ್ ವಹಿಸಿದ್ದರು
ಕಾರ್ಯಕ್ರಮದ ಮುಖ್ಯ ವೇದಿಕೆಯಲ್ಲಿ ಆರೋಗ್ಯ ನಿರೀಕ್ಷಣಾಧಿಕಾರಿಗಳಾದ ಕೆ ಬಿ ಶ್ಯಾಶೆಟ್ಟಿ ವಿಜಯ ತುಕೋಳ್ ಪ್ರಾಥಮಿಕ ಆರೋಗ್ಯ ಸುರಕ್ಷಾ ಅಧಿಕಾರಿಗಳಾದ ಗೀತಾ ನಾಯಕ ಶೀಲಾ ಪೂಜಾರ ಸಮುದಾಯ ಆರೋಗ್ಯ ಅಧಿಕಾರಿಗಳಾದ ಮಾಂತೇಶ ಮಾದರ & ಆಶಾ ಕಾರ್ಯಕರ್ತೆಯರು ಹಾಜರಿದ್ದರು

You may also like

Leave a Comment

ಸದ್ಗುಣ ಸಚ್ಚಾರಿತ್ರ್ಯದಿಂದ ಬದುಕು ಸಮೃದ್ಧ : ಶ್ರೀ ರಂಭಾಪುರಿ ಜಗದ್ಗುರುಗಳು   ಅಬ್ಬಿಗೇರಿಯಲ್ಲಿ ಕಾರ ಹುಣ್ಣಿಮೆ ಸಂಭ್ರಮ: ಬಿಳಿ ಎತ್ತಿನ ಕರಿ ಮುರಿತ – ಬಿಳಿ ಬೆಳೆಗೆ ಶುಭ ಸಂಕೇತ   ಕರಿ ಹರಿದ ಬಿಳಿ ಎತ್ತು: ಊರಿಗೇ ಒಲಿದ ಅದೃಷ್ಟ, ಈ ಬಾರಿ ಬಂಪರ್ ಬೆಳೆ ನಿಶ್ಚಿತ!   ಜೀವನದಲ್ಲಿ ಗುರಿಯಿರಲಿ ಉರಿ ಬೇಡ : ಶ್ರೀ ರಂಭಾಪುರಿ ಜಗದ್ಗುರುಗಳು   ಶ್ರೀ ರಂಭಾಪುರಿ ಜಗದ್ಗುರುಗಳವರ ಜುಲೈ ಮಾಹೆಯ ಪ್ರವಾಸ