Home ಜಿಲ್ಲಾ ಸುದ್ದಿಗಳುಕಠಿಣ ಪರಿಶ್ರಮದಿಂದ ಯಶಸ್ಸು ಸಾಧ್ಯ ರೋಣ ಸಿಪಿಐ ವಿಜಯ್ ಕುಮಾರ್ ನಾಯಕ್.

ಕಠಿಣ ಪರಿಶ್ರಮದಿಂದ ಯಶಸ್ಸು ಸಾಧ್ಯ ರೋಣ ಸಿಪಿಐ ವಿಜಯ್ ಕುಮಾರ್ ನಾಯಕ್.

by Editor
0 comments

ಚೈತನ್ಯ ನ್ಯೂಸ್ 24 ನರೇಗಲ್ಲ ಮೇ.19:

ಹಿಂದುಳಿದ ಎಲ್ಲಾ ಮಕ್ಕಳು ಶಿಕ್ಷಣದಿಂದ ವಂಚಿತರಾಗಬಾರದು ಸಂವಿಧಾನದ ಎಲ್ಲಾ ಕರ್ತವ್ಯ ಮತ್ತು ಕಾರ್ಯಗಳನ್ನು ಸರಿಯಾಗಿ ಓದಿ ನಿಮ್ಮ ಜೀವನವನ್ನು ಉಜ್ವಲ ಗೊಳಿಸಿಕೊಳ್ಳಿ ಎಂದು ರೋಣ ಸಿಪಿಐ ವಿಜಯ್ ಕುಮಾರ್ ನಾಯಕ್ ಹೇಳಿದರು.
ನೆರೆಗಲ್ಲ ಮಜರೇ ಗ್ರಾಮವಾದ ತೋಟಗಂಟಿಯಲ್ಲ ಶನಿವಾರ ಸಾಯಂಕಾಲ ಗದಗ್ ಜಿಲ್ಲಾ ಪೊಲೀಸ್ ಇಲಾಖೆ ರೋಣ ಪೊಲೀಸ್ ವೃತ್ತ ನಿರೀಕ್ಷಕರ ವಲಯ ಹಾಗೂ ನೆರಗಲ್ ಪೊಲೀಸ್ ಠಾಣೆ ವ್ಯಾಪ್ತಿಯ ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡ ಕುಂದು ಕೊರತೆಗಳ ಸಭೆಯನ್ನು ಉದ್ದೇಶಿಸಿ ಅವರು ಮಾತನಾಡಿದರು.


ಸಂವಿಧಾನ ಶಿಲ್ಪಿ ಡಾಕ್ಟರ್ ಬಾಬಾ ಸಾಹೇಬ್ ಅಂಬೇಡ್ಕರ್ ಅವರು ಬರೆದ ಸಂವಿಧಾನವನ್ನು ಓದಿ ಎಲ್ಲಾ ಮಕ್ಕಳು ತಮ್ಮ ಜೀವನವನ್ನು ಬದಲಾವಣೆ ಮಾಡಿಕೊಳ್ಳುವುದು ಸಮಾಜದಲ್ಲಿ ಅಹಿತಕರ ಘಟನೆಯಲ್ಲಿ ಯಾರೂ ಭಾಗಿಯಾಗಬಾರದು ಸಮಾಜದಲ್ಲಿ ಏನಾದರೂ ಸಮಸ್ಯೆಗಳು ಇದ್ದರೆ ನಮ್ಮ ಪೊಲೀಸ್ ಇಲಾಖೆಗೆ ತಿಳಿಸಬೇಕು ನಾವು ಅದನ್ನು ಪರಿಶೀಲಿಸಿ ತಮಗೆ ನ್ಯಾಯ ಒದಗಿಸುವ ಕೆಲಸ ಮಾಡುತ್ತೇವೆ .ಸದಾ ಪೊಲೀಸ್ ಇಲಾಖೆ ನಿಮ್ಮೊಂದಿಗೆ ಇದೆ ಎಂದು ಹೇಳಿದರು.

ನರೇಗಲ್ಲ ಪೊಲೀಸ್ ಠಾಣೆಯ ಪಿಎಸ್ಐ ಐಶ್ವರ್ಯ ನಾಗರಾಳ ಮಾತನಾಡುತ್ತಾ ಸಮಾಜದಲ್ಲಿ ಯಾರೂ ಮೇಲಲ್ಲ ಯಾರು ಕೇಳಲ್ಲ ಎಲ್ಲರೂ ಒಂದೇ ಎಲ್ಲ ಮಕ್ಕಳನ್ನು ಶಿಕ್ಷಣ ಕಲಿಸುವುದರ ಜೊತೆಗೆ ಸಂಸ್ಕಾರವನ್ನು ಕಲಿಸಬೇಕು ಅಂದಾಗ ಮಾತ್ರ ನಮ್ ಜೀವನ ಸಾರ್ಥಕವಾಗುತ್ತದೆ ಎಂದು ಹೇಳಿದರು.


ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡದ ಮಕ್ಕಳು ಉನ್ನತ ಹುದ್ದೆಯಲ್ಲಿ ಸೇವೆ ಸಲ್ಲಿಸುವ ಅಂಗ ಮಕ್ಕಳನ್ನು ಬೆಳೆಸಬೇಕೆಂದು ಕಿವಿ ಮಾತು ಹೇಳಿದರು.
ಪೊಲೀಸ್ ಇಲಾಖೆ ಸಿಬ್ಬಂದಿಗಳಾದ ಎಸ್ ಬಿ ವಡ್ಡಟ್ಟಿ. ಷರೀಫ್ ಮುಲ್ಲಾ .ಬಿ ಎಸ್ ಮಾಯಣ್ಣವರ್ .ಉಪಸ್ಥಿತರಿದ್ದರು
ಸಮಾಜದ ಹಿರಿಯರಾದ ಲಕ್ಷ್ಮಪ್ಪ ಹಳ್ಳದಮನಿ ದೇವಪ್ಪ ನುಲ್ಕಿ ಎಲ್ಲಪ್ಪ ಹಳ್ಳದಮನಿ ಫಕೀರಪ್ಪ ಪೂಜಾರ ಶರಣಪ್ಪ ಹಳ್ಳದಮನಿ ಶೇಖಪ್ಪ ಡಂಬಳ ಕಳಕಪ್ಪ ಡಂಬಳ ಕಾರ್ಯಕ್ರಮವನ್ನು ಉಪನ್ಯಾಸಕ ಶಿವಾನಂದ ಗೋಗೇರಿ ನಿರೂಪಿಸಿ ವ0ದಿಸಿದರು.

You may also like

Leave a Comment

➤ ಶ್ರೀ ರಂಭಾಪುರಿ ಜಗದ್ಗುರುಗಳವರ ಸಪ್ಟಂಬರ್ ಮಾಹೆಯ ಪ್ರವಾಸ    ➤ ಅಬ್ಬಿಗೇರಿ ಶ್ರೀ ಬಯಲು ಬಸವೇಶ್ವರ ದೇವಸ್ಥಾನದಲ್ಲಿ ಸನ್ಮಾನ್ಯ ಜಿ.ಎಸ್. ಪಾಟೀಲರಿಂದ ಪೂಜೆ ಸಲ್ಲಿಕೆ.   ➤    ➤ ಗಣೇಶೋತ್ಸವಕ್ಕೆ ಕಟ್ಟುನಿಟ್ಟಿನ ನಿಯಮ: ಡಿಜೆ ಸಂಪೂರ್ಣ ನಿಷೇಧ:ಶಾಂತಿಯುತ ಆಚರಣೆಗೆ ಆದ್ಯತೆ ನೀಡಿ : ಪಿ ಎಸ್ ಐ ಐಶ್ವರ್ಯ ನಾಗರಾಳ    ➤ ಜೀವನದಲ್ಲಿ ಆಸಕ್ತಿ ಕಳೆದುಕೊಂಡು ಬಾಳಬಾರದು : ಶ್ರೀ ರಂಭಾಪುರಿ ಜಗದ್ಗುರುಗಳು