Home ಜಿಲ್ಲಾ ಸುದ್ದಿಗಳುಶ್ರೀ ದೇವಿಗೆ ಕುಂಕುಮಾರ್ಚನೆ ಶ್ರೇಷ್ಠ ಆಚರಣೆ-ಅರುಣ ಕುಲಕರ್ಣಿ

ಶ್ರೀ ದೇವಿಗೆ ಕುಂಕುಮಾರ್ಚನೆ ಶ್ರೇಷ್ಠ ಆಚರಣೆ-ಅರುಣ ಕುಲಕರ್ಣಿ

by Editor
0 comments

ಚೈತನ್ಯ ನ್ಯೂಸ್ 24 ನರೇಗಲ್ಲ ಮೇ.23:

ಹಿಂದೂ ಧರ್ಮ ಸಂಸ್ಕೃತಿಯಲ್ಲಿ ಕುಂಕುಮಕ್ಕೆ ವಿಶಿಷ್ಠವಾದ ಮಹತ್ವದ ಸ್ಥಾನವಿದೆ. ಸಿಂಧೂರ, ಕೇಸರಿ, ಎಂದೂ ಕರೆಯಲ್ಪಡುವ ಕುಂಕುಮವು ಮಹಿಳೆಯರ ಹಣೆಯ ಮೇಲಿದ್ದರೆ ಅದಕ್ಕಿರುವ ಸೊಗಸೆ ಬೇರೆ. ಬೈತಲೆಯ ಮೇಲೆ ಧರಿಸುವ ಕುಂಕುಮವನ್ನು ಸಿಂಧೂರವೆAದು ಕರೆಯಲಾಗುತ್ತಿದೆ. ಇಂತಹ ಕುಂಕುಮವನ್ನು ಶ್ರೀ ದೇವಿಗೆ ಅರ್ಪಿಸುವ ಕುಂಕುಮಾರ್ಚನೆಯು ಶ್ರೇಷ್ಠ ಆಚರಣೆಯಾಗಿದೆ ಎಂದು ನಿವೃತ್ತ ಶಿಕ್ಷಕ ಅರುಣ ಕುಲಕರ್ಣಿ ಹೇಳಿದರು.
ಪಟ್ಟಣದ ಶ್ರೀ ದತ್ತಾತ್ರೇಯ ದೇವಸ್ಥಾನದಲ್ಲಿ ಅಧಿಕ ಮಾಸದ ನಿಮಿತ್ಯ ಸುಮಂಗಲೆಯರೆಲ್ಲರೂ ಸೇರಿ ಆಚರಿಸಿದ ಕುಂಕುಮಾರ್ಚನೆ ಸಂದರ್ಭದಲ್ಲಿ ಅವರು ಮಾತನಾಡಿದರು.
ಶುದ್ಧ ಕುಂಕುಮವನ್ನು ಅರಿಷಿಣ ಮತ್ತು ಸುಣ್ಣಗಳಿಂದ ಸಿದ್ಧಪಡಿಸಲಾಗುತ್ತದೆ. ಅದಕ್ಕಾಗಿ ಅರಿಷಿಣ-ಕುಂಕುಮವು ಮಂಗಳ ದ್ರವ್ಯವೆಂದು ಗ್ರಹಿಸಲ್ಪಟ್ಟಿದ್ದು, ಅನೇಕ ಮಂಗಳಕರ ಸಂದರ್ಭಗಳಲ್ಲಿ ಈ ಎರಡನ್ನೂ ಬಳಕೆ ಮಾಡಲಾಗುತ್ತಿದೆ. ಶ್ರೀ ದೇವಿಯ ಸಹಸ್ರ ನಾಮಾವಳಿಯನ್ನಾಗಲಿ ಇಲ್ಲವೆ ಲಲಿತಾ ಸಹಸ್ರ ನಾಮಾರ್ಚನೆಯನ್ನಾಗಲಿ ಹೇಳುತ್ತ ಶ್ರೀ ದೇವಿಯ ಭಾವಚಿತ್ರಕ್ಕೆ ಇಲ್ಲವೆ ಮೂರ್ತಿಗೆ ಅರ್ಪಿಸುವ ಕುಂಕುಮವು ಕುಂಕುಮಾರ್ಚನೆಯೆAದು ಕರೆಯಿಸಿಕೊಳ್ಳುತ್ತದೆ. ಈ ವೃತವನ್ನು ಮಾಡುವ ಮಹಿಳೆಯರು ಅಖಂಡ ಮುತ್ತೆöÊದೆತನದ ಸೌಭಾಗ್ಯವನ್ನು, ಮತ್ತಿತರ ಶುಭ ಫಲಗಳನ್ನು ಪಡೆಯುತ್ತಾರೆ ಎಂದು ತಿಳಿಸಿದ ಕುಲಕರ್ಣಿ, ದೇವಿಯ ವಾರಗಳಂದು ಮತ್ತು ಅನುಕೂಲಕರವಾದ ದಿನಗಳಂದು ಶ್ರೀ ದೇವಿಯನ್ನು ಶ್ರದ್ಧಾ ಭಕ್ತಿಗಳಿಂದ ಪೂಜಿಸಿ ಕುಂಕುಮಾರ್ಚನೆಯನ್ನು ನೆರವೇರಿಸಬಹುದೆಂದರು.
ಕುAಕುಮಾರ್ಚನೆಯ ನೇತೃತ್ವವನ್ನು ವಿಮಲಾಬಾಯಿ ಗ್ರಾಮಪುರೋಹಿತ ವಹಿಸಿದ್ದರು. ಕಾರ್ಯಕ್ರಮದಲ್ಲಿ ಡಾ. ಸಪ್ನಾ ಕಾಳೆ, ಸಂಧ್ಯಾ ಕುಲಕರ್ಣಿ, ಜ್ಯೋತಿ ನಾಡಿಗೇರ, ಪರಿಮಳಾ ಗ್ರಾಮಪುರೋಹಿತ, ಶೋಭಾ ಸೂರಭಟ್ಟನವರ, ಶೋಭಾ ಕುಲಕರ್ಣಿ, ಅನಿತಾ ಗ್ರಾಮಪುರೋಹಿತ, ಪ್ರತೀಕ್ಷಾ ಕುಲಕರ್ಣಿ, ವಾಣಿ ಕುಲಕರ್ಣಿ, ರೂಪಾ ಗ್ರಾಮಪುರೋಹಿತ, ಲಕ್ಷಿö್ಮÃ ಗ್ರಾಮಪುರೋಹಿತ, ಜಯಶ್ರೀ ಗ್ರಾಮಪುರೋಹಿತ, ವಿದ್ಯಾ ಹೆಗಡೆ, ದೀಪಾ ಕುಲಕರ್ಣಿ, ಸೀಮಾ ಕೊಂಡಿ, ಸುರೇಖಾ ದೇಶಪಾಂಡೆ, ರಾಜಶ್ರೀ ಕುಲಕರ್ಣಿ, ತೃಪ್ತಿ ಸರಾಫ್, ಭಾಗ್ಯಾಬಾಯಿ ಕಾಳೆ ಇನ್ನಿತರರಿದ್ದರು.
ಫೋಟೋ ಶೀರ್ಷಿಕೆ
ಪಟ್ಟಣದ ಶ್ರೀ ದತ್ತಾತ್ರೇಯ ದೇವಸ್ಥಾನದಲ್ಲಿ ಸುಮಂಗಲೆಯರು ಅಧಿಕ ಮಾಸದ ನಿಮಿತ್ಯ ಶ್ರೀ ದೇವಿಗೆ ಕುಂಕುಮಾರ್ಚನೆಯನ್ನು ನೆರವೇರಿಸಿದರು.

You may also like

Leave a Comment

ಸದ್ಗುಣ ಸಚ್ಚಾರಿತ್ರ್ಯದಿಂದ ಬದುಕು ಸಮೃದ್ಧ : ಶ್ರೀ ರಂಭಾಪುರಿ ಜಗದ್ಗುರುಗಳು   ಅಬ್ಬಿಗೇರಿಯಲ್ಲಿ ಕಾರ ಹುಣ್ಣಿಮೆ ಸಂಭ್ರಮ: ಬಿಳಿ ಎತ್ತಿನ ಕರಿ ಮುರಿತ – ಬಿಳಿ ಬೆಳೆಗೆ ಶುಭ ಸಂಕೇತ   ಕರಿ ಹರಿದ ಬಿಳಿ ಎತ್ತು: ಊರಿಗೇ ಒಲಿದ ಅದೃಷ್ಟ, ಈ ಬಾರಿ ಬಂಪರ್ ಬೆಳೆ ನಿಶ್ಚಿತ!   ಜೀವನದಲ್ಲಿ ಗುರಿಯಿರಲಿ ಉರಿ ಬೇಡ : ಶ್ರೀ ರಂಭಾಪುರಿ ಜಗದ್ಗುರುಗಳು   ಶ್ರೀ ರಂಭಾಪುರಿ ಜಗದ್ಗುರುಗಳವರ ಜುಲೈ ಮಾಹೆಯ ಪ್ರವಾಸ